LORD SRIVENKATESWARA THIRUPATHI
ಎಲ್ಲ ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆದರೆ ಇಲ್ಲಿ ನಿತ್ಯಜಾತ್ರೆ. ದಿನವೂ ದೇಶದ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದುಬರುತ್ತದೆ.
ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ನೀನೊಲಿದ ಮನೆ ಮನೆಯು ಲಕ್ಷ್ಮೀ ನಿವಾಸ.. ಎಂದು ಭಕ್ತರು ಹಾಡಿ ಹೊಗಳಿದ್ದಾರೆ. ಗೋವಿಂದನ ಕೃಪೆಯೊಂದಿದ್ದರೆ ಬದುಕು ಬಂಗಾರ ಎಂಬುದು ನಂಬಿಕೆ. ವೆಂಕಟೇಶ್ವರನ ಸನ್ನಿಧಿಗೆ ಬಂದ ಭಕ್ತರು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಿ, ತಮ್ಮ ಕೃತಜ್ಞತೆಯ ಸಂಕೇತವಾಗಿ ಕೋಟ್ಯಂತರ ರೂಪಾಯಿ ಆಭರಣಗಳನ್ನು ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡುತ್ತಿದ್ದಾರೆ.
ಪವಿತ್ರ ತಿರುಮಲೆಯಲ್ಲಿ ಇರುವ ಭವ್ಯ ದೇವಾಲಯದಲ್ಲಿ ವೆಂಕಟೇಶ್ವರ ವಿರಾಜಮಾನನಾಗಿದ್ದಾನೆ. ಈ ದೇವಾಲಯದ ಇತಿಹಾಸ ಇಂದು ನಿನ್ನೆಯದಲ್ಲ. ವೇದ-ಪುರಾಣ ಕಾಲದಿಂದಲೂ ಈ ಭೂಮಿ ಪವಿತ್ರ ಪುಣ್ಯಕ್ಷೇತ್ರವೆನಿಸಿದೆ.
ಐತಿಹ್ಯ : ತಿರುಮಲ ಒಂದು ಕಾಲದಲ್ಲಿ ಮೇರುಪರ್ವತವಾಗಿತ್ತು. ಒಮ್ಮೆ ಆದಿಶೇಷನಿಗೂ ವಾಯುದೇವನಿಗೂ ನಡೆದ ಹೋರಾಟದಲ್ಲಿ ಪರ್ವತ ಎರಡು ಹೋಳಾಯಿತು. ಅದರಲ್ಲೊಂದು ಭಾಗ ಭೂಮಿಗೆ ಬಿತ್ತು. ಅದುವೇ ತಿರುಮಲ. ಇಲ್ಲಿ ವೆಂಕಟೇಶ್ವರ ನೆಲೆಸಿದ ಮೇಲೆ ಇದು ವಿಷ್ಣುಕ್ಷೇತ್ರವಾಯ್ತು. ಇಲ್ಲಿರುವ ವೆಂಕಟೇಶ್ವರನ ವಿಗ್ರಹ ಶಿಲ್ಪಿ ಕೆತ್ತಿದ್ದಲ್ಲ. ಭೂಮಿಯಲ್ಲಿ ಶ್ರೀನಿವಾಸನಾಗಿ ಹುಟ್ಟಿದ ಮಹಾವಿಷ್ಣು ಸ್ವಯಂ ಶಿಲೆಯಾಗಿ ಇಲ್ಲಿ ನೆಲೆಸಿದ್ದಾನೆ ಎನ್ನುತ್ತದೆ ವೆಂಕಟಾಚಲ ಮಹಾತ್ಮೆ.
ಇಲ್ಲಿರುವ ಪುರಾತನ ದೇವಸ್ಥಾನ ಪಲ್ಲವ ವಾಸ್ತು ಶೈಲಿಯಲ್ಲಿದೆ. ಗೋಪುರ ಪೂರ್ವಾಭಿಮುಖವಾಗಿದೆ. ಗರ್ಭಗುಡಿಯ ಮೇಲಣ ವಿಮಾನ ಗೋಪುರಕ್ಕೆ ಚಿನ್ನದ ತಗಡಿನ ಅಲಂಕಾರ ಮಾಡಲಾಗಿದೆ.
ಮೂಲವಿಗ್ರಹ ಹರಿ -ಹರ ಪ್ರತೀಕವಾಗಿದ್ದು, ಶೈವ- ವೈಷ್ಣವರ ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಹೀಗಾಗೇ ವೆಂಕಟನಾಥ ಇಲ್ಲಿ ವೆಂಕಟೇಶ್ವರನಾಗಿದ್ದಾನೆ.
ಶಂಖ, ಚಕ್ರಧಾರಿಯಾದ ಚತುರ್ಭುಜ ವೆಂಕಟೇಶ ಒಂದು ಕೈಯನ್ನು ಸೊಂಟದ ಮೇಲಿಟ್ಟುಕೊಂಡಿದ್ದರೆ, ಮತ್ತೊಂದು ಕೈ ಇನ್ನೊಂದು ಅಭಯಮುದ್ರೆಯಲ್ಲಿದೆ. ಇಲ್ಲಿ ನಡೆವ ಉತ್ಸವಗಳಲ್ಲಿ ಭಾದ್ರಪದ ಮಾಸದಲ್ಲಿ ಒಂಬತ್ತು ದಿನ ನಡೆಯುವ ಬ್ರಹ್ಮೋತ್ಸವ ಬಹು ಮುಖ್ಯವಾದದ್ದು. ಪ್ರತಿ ಮೂರು ವರ್ಷಗಳಿಗೊಮ್ಮೆ ನವರಾತ್ರಿಯಲ್ಲಿ ಶ್ರೀವಾರಿ ಬ್ರಹ್ಮೊತ್ಸವ ನಡೆಯುತ್ತವೆ. ಇಲ್ಲಿಗೆ ಬರುವ ಹರಕೆ ಹೊತ್ತ ಭಕ್ತರು ತಮ್ಮ ಮುಡಿ ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಾರೆ.
1933ರಲ್ಲಿ ಅಂದಿನ ಮೈಸೂರು ಸರ್ಕಾರ ವಿಶೇಷ ಕಾಯಿದೆ ತಂದು ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ತಿರುಮಲ ತಿರುಪತಿ ದೇವಸ್ಥಾನ ಸಮಿತಿಗೆ ವಹಿಸಿತು. 1987ರಲ್ಲಿ ಆಂಧ್ರಪ್ರದೇಶ ಸರ್ಕಾರ ಇದಕ್ಕೆ ಟ್ರಸ್ಟಿಗಳ ಮಂಡಳಿ ರಚಿಸಿದೆ. ಟಿಟಿಡಿ ಟ್ರಸ್ಟ್ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ, ಶೈಕ್ಷಿಣಿಕ, ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದೆ.
ಸುತ್ತಮುತ್ತಲ ಪುಣ್ಯಕ್ಷೇತ್ರಗಳು : ಸ್ವಾಮಿಪುಷ್ಕರಿಣಿ, ಆಕಾಶಗಂಗೆ, ಪಾಪವಿನಾಶನಂ, ತುಂಬುರುತೀರ್ಥ, ಅಷ್ಠಾನ ಮಂಟಪ, ವೆಂಕಟೇಶ್ವರ ಧ್ಯಾನ ಜ್ಞಾನ ಮಂದಿರ – ವಸ್ತು ಸಂಗ್ರಹಾಲಯ.
ತಿರುಪತಿಗೆ 12 ಕಿಲೋ ಮೀಟರ್ ದೂರದಲ್ಲಿ ಮಂಗಪುರಂನಲ್ಲಿ ಅಲಮೇಲು ಅಮ್ಮನವರ ಗುಡಿ ಇದೆ. ತಿರುಪತಿಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಪಿಲ ಮಹರ್ಷಿಗಳು ಪ್ರತಿಷ್ಠಾಪಿಸಿದ ಕಪಿಲೇಶ್ವರ ದೇವಾಲಯವಿದೆ. ಬೆಟ್ಟದ ಕೆಳಗೆ ವರದರಾಜಸ್ವಾಮಿ ದೇವಾಲಯವಿದೆ. ಬೆಟ್ಟದ ಮೇಲೆ ಹಾಗೂ ಕೆಳಗೆ ಉಳಿದುಕೊಳ್ಳಲು ಟ್ರಸ್ಟ್ ನ ಛತ್ರ, ವಸತಿಗೃಹಗಳು ಹಾಗೂ ಅನೇಕ ಹೋಟೆಲ್ ಗಳಿವೆ.
ರೈಲು ಮತ್ತು ಬಸ್ ಸೌಕರ್ಯ ಉತ್ತಮವಾಗಿದೆ. ಕಂಚಿ ಹಾಗೂ ಕಾ
కామెంట్లు లేవు:
కామెంట్ను పోస్ట్ చేయండి